"ಭಾರತೀಯರು ಭಾರತರಾದರೆ ವಿಶ್ವವೇ ಭಾರತವಾಗುತ್ತದೆ"

– ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ

ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು

ನಾವಿಂದು..

ನಮ್ಮತನ

ಕನ್ನಿಕೆಯಲ್ಲಿ ಮಾನವತೆ-ಭಾರತೀಯತೆ-ಹಿಂದುತ್ವಗಳನ್ನು ಉದ್ಬೋಧಗೊಳಿಸಬೇಕಿದೆ.

ಸ್ವಾವಲಂಬನೆ

ಆಧುನಿಕ ಶಿಕ್ಷಣದಲ್ಲಿ ಪರಿಪೂರ್ಣಳನ್ನಾಗಿಸಿ ಅವಳನ್ನು ಸ್ವಾವಲಂಬಿಯಾಗಿಸಬೇಕಿದೆ.

ಸಂಸ್ಕಾರ

ಸಂಸ್ಕಾರದ ಸಾಣೆಯಿಟ್ಟು, ಮನೆಯ ಮಗುವೆಂಬ ಮಾಣಿಕ್ಯದ ಮಣಿಯನ್ನು ಭಾರತಮಾತೆಯ ಆಭೂಷಣವಾಗಿಸಬೇಕಿದೆ.

ಕಲಾ ಕೌಶಲ

ಕಲೆ – ಕೌಶಲಗಳಲ್ಲಿ ಪರಿಣತಿ ನೀಡಿ, ಅವಳನ್ನು ಸಮಾಜದ ಆನಂದವರ್ಧಿನಿಯನ್ನಾಗಿಸಬೇಕಿದೆ. 

ದೇಶಪ್ರೇಮ

ನಮ್ಮಂಗಳದ ಬಾಲಕಿಯರನ್ನು ಭಾರತಮಾತೆಯ ವರಕುವರಿಯರನ್ನಾಗಿಸಬೇಕಿದೆ; ಶ್ರೇಷ್ಠ ಭಾರತನಾರಿಯರನ್ನಾಗಿಸಬೇಕಿದೆ.

ಭವಿಷ್ಯ ನಿರ್ಮಾಣ

ಭಾರತದ ಭವಿಷ್ಯದ ಸಂಪತ್ತಾಗಬಲ್ಲ ಭಾವೀ ಜನನಾಯಕಿ, ಅಧಿಕಾರಿಣಿ, ಉದ್ಯಮಿ, ನ್ಯಾಯವಾದಿನಿ, ವೈದ್ಯೆ, ತಂತ್ರಜ್ಞೆ, ಅರ್ಥಶಾಸ್ತ್ರಜ್ಞೆ, ಲೇಖಕಿ, ಸಾಧ್ವಿ, ಶಿಕ್ಷಕಿ, ಕಲಾವಿದೆ, ವಿಜ್ಞಾನಿ, ಜ್ಞಾನಿಗಳನ್ನು ನಿರ್ಮಿಸಬೇಕಿದೆ. 

ಪಾರಂಪರಿಕ ತಜ್ಞತೆ

ಜ್ಞಾನ – ವಿಜ್ಞಾನಗಳಿಂದ ಪರಿಪೂರ್ಣವಾದ ಭಾರತೀಯ ವಿದ್ಯೆ – ಕಲೆಗಳ ಅರಿವನ್ನು ನೀಡಿ ಬಾಲಕಿಯನ್ನು ನೈಜ ಭಾರತೀಯಳನ್ನಾಗಿಸಬೇಕಿದೆ.

ಪರಿಪೂರ್ಣತೆ

ನಮ್ಮ ಮಗುವನ್ನು ಸರ್ವಗುಣ-ಪರಿಪೂರ್ಣತೆಯ ದ್ವಾರಾ ಸರ್ವರ ಕಣ್ಮಣಿಯಾಗಿಸಬೇಕಿದೆ.

ಗುರುಕುಲವಿದು ವಿಷ್ಣುಗುಪ್ತ~ವಿಶ್ವವಿದ್ಯಾಪೀಠದ ದ್ವಾರ

ಭಾರತೀಯ ವಿದ್ಯೆ – ಕಲೆಗಳನ್ನು ಬೋಧಿಸಲು ತಕ್ಷಶಿಲೆಯ ಮಾದರಿಯಲ್ಲಿ ಉದಯಿಸುತ್ತಿರುವ ವಿಷ್ಣುಗುಪ್ತ~ ವಿಶ್ವವಿದ್ಯಾಪೀಠದ ಪರಿಸರದಲ್ಲಿಯೇ ಗುರುಕುಲವು ನಡೆಯಲಿರುವುದು. ವಿದ್ಯಾರ್ಥಿನಿಯರಿಗೆ ಬೇರೆಲ್ಲೂ ಸಿಗದ ಮೂರು ಅವಕಾಶಗಳನ್ನು ಕಲ್ಪಿಸುತ್ತದೆ.

  1. ವಿಶ್ವದಲ್ಲಿಯೇ ವಿಶಿಷ್ಟ ಎನ್ನಬಹುದಾದ ವಿಶ್ವವಿದ್ಯಾಪೀಠದ ಪರಿಸರದಲ್ಲಿ, ವಿದ್ಯಾನಿಧಿಗಳೆನ್ನಿಸಿದ ಪ್ರಾಜ್ಞರ ನಡುವೆ ವಾಸ, ವಿದ್ಯಾಭ್ಯಾಸ.
  2. ಭವಿಷ್ಯದಲ್ಲಿ ಭಾರತೀಯವಾದ ಯಾವುದಾದರೂ ವಿದ್ಯೆ-ಕಲೆಗಳಲ್ಲಿ ಮಹಾಪರಿಣತಳನ್ನಾಗಿಸುವ ಹಿನ್ನೆಲೆಯಲ್ಲಿ ಎಳವೆಯಿಂದಲೇ ಮಗುವಿನಲ್ಲಿ ಸುಪ್ತವಾಗಿರುವ ಪ್ರತಿಭೆಯ ಅನ್ವೇಷಣೆ, ತರಬೇತಿ.
  3. ಗುರುಕುಲದ ಅಧ್ಯಯನದ ಬಳಿಕ ವಿಶ್ವವಿದ್ಯಾಪೀಠದಲ್ಲಿ ಪ್ರವೇಶಾವಕಾಶ; ಭಾರತೀಯವಾದ ಯಾವುದೇ ವಿದ್ಯೆ ಅಥವಾ ಕಲೆಗಳಲ್ಲಿ ಉನ್ನತಾಧ್ಯಯನ ನಡೆಸಿ ಪರಿಪೂರ್ಣ ಪರಿಣತಿಯನ್ನು ಸಾಧಿಸಿ ಮಹಾಮೇರುವೆನಿಸುವ ಅಪೂರ್ವ ಅವಕಾಶ.

ದಿವ್ಯ - ಭವ್ಯ - ರಮ್ಯ ಪರಿಸರ

a4

ಶ್ರೀರಾಮನ ಪರಮಸೇವಕ, ಸೂರ್ಯದೇವನ ವರಶಿಷ್ಯ, ಸರ್ವ-ವಿದ್ಯಾವಿಶಾರದ ಆಂಜನೇಯನ ಜನ್ಮಭೂಮಿ.

p3

ಪಶ್ಚಿಮಸಮುದ್ರದ ಪುಣ್ಯತೀರ

a2

ಶತಶೃಂಗ ಪರ್ವತದ ಪಾವನ ಶಿಖರ.

a3

ವಿಶ್ವದ ಏಕೈಕ ಆತ್ಮಲಿಂಗವಾದ ಗೋಕರ್ಣದ ಮಹಾಬಲೇಶ್ವರನ ಸನ್ನಿಧಿ.

ಹೀಗಿರಲಿದೆ‌ ಗುರುಕುಲ

  • ಸ್ಮಾರ್ಟ್ ಕ್ಲಾಸ್ ಸೌಲಭ್ಯ.
  • ನಾಡಿನ ಶ್ರೇಷ್ಠ ಶಿಕ್ಷಕರಿಂದ ಆನ್ ಲೈನ್ ಪಾಠ.
  • ಮಕ್ಕಳನ್ನು ಓದಿಸಲು ಜೊತೆಗೇ ಇರುವ ನುರಿತ ಮೆಂಟರ್ ಗಳು.
  • ಅನುಭವಿ ವಿಷಯತಜ್ಞರೊಂದಿಗೆ ಮಕ್ಕಳ ಸಂವಹನ.
  • ಭಾರತ ಸರ್ಕಾರದ NIOS ಪಠ್ಯಕ್ರಮದಂತೆ ಪಾಠ – ಪರೀಕ್ಷೆ – ಪದವಿಗಳು.
  • ಆಧುನಿಕ ಪದವಿ ಪಡೆಯಲು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಬೇಕಾದ ಅರಿವು – ಸಾಮರ್ಥ್ಯ ವೃದ್ಧಿ.
  • ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಸೌಲಭ್ಯ.
  • ವಿಜ್ಞಾನ ಮತ್ತು ಕಂಪ್ಯೂಟರ್ ಪ್ರಯೋಗಾಲಯ.
  • ನಮ್ಮ ಭವ್ಯ ಪರಂಪರೆಯ ಸಮಗ್ರ ಅರಿವು.
  • ಭಾರತದ ಎಲ್ಲ ವಿದ್ಯೆಕಲೆಗಳ ಸಮಗ್ರ ಪರಿಚಯ.
  • ಸಂಸ್ಕಾರಸಂಸ್ಕೃತಿಗಳ ಅಳವಡಿಕೆ.
  • ಕಲೆಗಳಲ್ಲಿ ಪರಿಣತಿ.
  • ಕುಶಲ ಕಲೆಗಳಲ್ಲಿ ತರಬೇತಿ.
  • ಆತ್ಮರಕ್ಷಣೆಯ ಕಲೆಗಳು ಮೇಳೈಸಿದ ಶಿಕ್ಷಣ.
  • ಎಳೆ ವಯಸ್ಸಿನಲ್ಲಿಯೇ ಬಂದಲ್ಲಿ ಅಂಥವರಿಗೆ ಒಂದಕ್ಕಿಂತ ಹೆಚ್ಚು ಭಾರತೀಯ ವಿದ್ಯೆಕಲೆಗಳಲ್ಲಿ ಪರಿಣತಿ.
  • ಪ್ರಕೃತಿಗೆ ತೆರೆದುಕೊಂಡ ಕುಟೀರಗಳಲ್ಲಿ ಮುಕ್ತ ಕಲಿಕೆ.

ರಾಮಾಯಣ, ಮಹಾಭಾರತ, ಪುರಾಣ, ಇತಿಹಾಸಗಳ ಪುಟಗಳನ್ನು ಬೆಳಗಿದ ಮಹಾಪುರುಷರ ಚರಿತ್ರೆಯ ಮೂಲಕ ಭವ್ಯ ವ್ಯಕ್ತಿತ್ವವನ್ನು ನಿರ್ಮಿಸುವ ಜೀವನಪಾಠ ಸ್ವತಃ

ಶ್ರೀ  ಮಜ್ಜಗದ್ಗುರು ಶಂಕರಾಚಾರ್ಯ
ಶ್ರೀ  ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಂದ.

ಗೋಸತ್ಸಂಗ

ಗುರುಕುಲಗಳ ಸನಿಹದಲ್ಲಿ ವಿದ್ಯಾರ್ಥಿಗಳಿಗಾಗಿಯೇ ನಿರ್ಮಿತವಾಗುತ್ತಿರುವ ದೇಶೀ ಗೋವುಗಳ ಸಹಜಾವಾಸ- ಪುಟ್ಟ ಗೋಸ್ವರ್ಗ.

ಇದರಲ್ಲಿ:

  • ಗೋಸಂಗ: ಗೋವು-ಕರುಗಳೊಡನೆ ನಿತ್ಯ ಹಿತವಾದ ಒಡನಾಟ; ಎಳೆಯರು ಸಹಜವಾಗಿಯೇ ಇಷ್ಟಪಡುವ ಈ ಸಂಗತಿ ಇಂದು ದುರ್ಲಭ.
  • ಗೋಸೇವೆ: ನಮ್ಮ ಪರಂಪರೆಯು ಪುಣ್ಯಪ್ರದವೆಂದು ಸಾರಿದ ಗೋಸೇವೆಯ ಸದಭ್ಯಾಸ ಎಳವೆಯಿಂದಲೇ.
  • ಗೋಜ್ಞಾನ: ಮೊಗೆದಷ್ಟೂ ಮುಗಿಯದ ಗೋವು-ಗವ್ಯಗಳ ಸುಜ್ಞಾನ ಮಗುವಿನ ಬೊಗಸೆಯಲ್ಲಿ.
  • ಗೋಕ್ಷೀರ: ಮೇಧಾವರ್ಧಕವಾದ ಮತ್ತು ಆರೋಗ್ಯಕಾರಕವಾದ ದೇಶೀ ಗೋವಿನ ಹಾಲೆಂಬ ಅಮೃತದ ನಿತ್ಯಪ್ರಾಪ್ತಿ.